Welcome

ಶಂಕರ್ ನಾಗ್ ರವರ ಕನ್ನಡ ಪ್ರೇಮ ಎಷ್ಟಿತ್ತು ಎಂಬುದಕ್ಕೆ ಇದಕ್ಕಿಂತ ಬೇರೆ ಸಾಕ್ಷಿ ಇಲ್ಲ..


ಶಂಕರ್ ನಾಗ್ ಅವರು ಕೇವಲ ಕಲಾವಿದರಲ್ಲ, ಕೇವಲ ಒಬ್ಬ ವ್ಯಕ್ತಿಯೂ ಅಲ್ಲ. ಅವರೊಂದು ಅದ್ಭುತ ಜೀವ ಚೈತನ್ಯ. ಆದ್ದರಿಂದಲೇ ಅವರು ನಮ್ಮನು ಅಗಲಿ ಹೋಗಿ ಇಷ್ಟು ವರ್ಷಗಳೇ ಕಳೆದಿದ್ದರೂ ಇಂದೂ ನಮ್ಮ ಮನಸಿನಲ್ಲಿ ಉಳಿದಿರುವುದು.

ದಿನದಿಂದ ದಿನಕ್ಕೆ ಅಭಿಮಾನಿಗಳು ಹೆಚ್ಚುತ್ತಿರುವುದು. ಶಂಕರ್ ನಾಗ್ ಅವರನ್ನು ಕಣ್ಣಾರೆ ನೋಡದ ಈ ಪೀಳೆಗೆಯವರೂ ಕೂಡ ಅವರನ್ನು ಹೃದಯದಲಿಟ್ಟು ಆರಾಧಿಸುತ್ತಿರುವುದು. ಇದು ಅತಿಶಯೋಕ್ತಿಯಲ್ಲ ಸತ್ಯ.

ಇದೆಲ್ಲ ನಿಮಗೆ ತಿಳಿಯದ ವಿಷಯವೇನಲ್ಲ. ಆದರೆ ಎಷ್ಟೋ ಜನರಿಗೆ ಗೊತ್ತಿಲ್ಲ. ಶಂಕರ್ ನಾಗ್ ಅವರ ಮಾತೃ ಭಾಷೆ ಕೊಂಕಣಿ. ಅವರ ಸಹೋದರ ಅನಂತ್ ನಾಗ್ ಎಷ್ಟೋ ಕಡೆ ಅದನ್ನು ಹೇಳಿಕೊಂಡಿದ್ದಾರೆ. ಅನಂತ್ ನಾಗ್ ಅವರ ಮೂಲಕವೇ ಶಂಕರ್ ನಾಗ್ ಕನ್ನಡ ಚಿತ್ರ ರಂಗಕ್ಕೆ ಬಂದದ್ದು. ಆದರೆ ಶಂಕರ್ ಅವರ ಕನ್ನಡ ಪ್ರೇಮ ಎಂತದ್ದು ಎಂದರೆ ತಮ್ಮ ಮಾತೃ ಭಾಷೆ ಕೊಂಕಣಿಯಾದರೂ ತಮ್ಮ ಮಗಳಿಗೆ ಕನ್ನಡವನ್ನು ಮಾತೃ ಭಾಷೆಯನ್ನಾಗಿ ಮಾಡಿದರು.

ಶಂಕರ್ ನಾಗ್ ಅವರಿಗೆ ಕನ್ನಡ ಎಂದರೆ ಅಪಾರ ಪ್ರೀತಿ. ತನಗೆ ಕೀರ್ತಿ, ಸಂಪತ್ತು ಎಲ್ಲವನ್ನೂ ಕೊಟ್ಟ ಕನ್ನಡ ಎಂದರೆ ಅವರಿಗೆ ಕನ್ನಡ, ಕನ್ನಡ ಜನರೆಂದರೆ ಪಂಚ ಪ್ರಾಣ. ಆದ್ದರಿಂದಲೇ ತಮ್ಮ ಮಗಳಿಗೆ ಕನ್ನಡವನ್ನೇ ಮಾತೃ ಭಾಷೆಯನ್ನಾಗಿ ಕಲಿಸಿದರು. ಎಷ್ಟೋ ಜನ ಹೀರೋ, ಹಿರೋಯಿನ್ ಗಳುತಮ್ಮ ಅಭಿಮಾನಿಗಳ ಮುಂದೆ ಮಾತ್ರ ಕನ್ನಡ ಭಾಷೆಯ ಬಗ್ಗೆ ಬಿಲ್ಡಪ್ ಕೊಡ್ತಾರೆ. ಆದರೆ ಅವರು ಮನೆಯಲ್ಲಿ ಮಾತೋಡೋದು ಮಾತ್ರ ಯಾವುದು ಬೇರೆ ಭಾಷೆಯಾಗಿರುತ್ತೆ. ಇನ್ನು ನಿಜ ಹೇಳಬೇಕೆಂದರೆ ಎಷ್ಟೋ ಜನ ಹೀರೋಗಳ ಮಕ್ಕಳಿಗೆ ಕನ್ನಡ ಅನ್ನೋ ಒಂದು ಭಾಷೆಯು ಇದೆಯಾ ಅನ್ನುವಷ್ಟರ ಮಟ್ಟಿಗೆ ಬೆಳೆಸಿರುತ್ತಾರೆ. ಅಂತವರಿಗೆಲ್ಲಾ ಶಂಕ್ರಣ್ಣ ಒಂದು ಪಾಠವಾಗಬೇಕು.