Welcome

ವಿಭಿನ್ನ ಪ್ರಯತ್ನದಿಂದ ಬಿಡುಗಡೆಗೆ ಸಜ್ಜಾಗಿರುವ ನಾನೊಂಥರ ಮೂವಿ..ಯಾವಾಗ ಗೊತ್ತಾ.?


ಇತ್ತಿಚಿನ ದಿನಗಳಲ್ಲಿ ಹೊಸಬರ ಚಿತ್ರಗಳು ತುಂಬಾ ಒಳ್ಳೆ ಕಂಟೆಂಟ್, ಇಟ್ಟುಕೊಂಡು ಚಿತ್ರದಲ್ಲಿ ಯಾವುದೇ ಕೊರತೆ ಇಲ್ಲದ ಹಾಗೆ, ಸದ್ದಿಲ್ಲದೆ ಬಿಡುಗಡೆ ಆಗಿ, ತುಂಬಾ ಯಶಸ್ಸು ಗಳಿಸಿದ ಚಿತ್ರಗಳು ಕೂಡ, ನಮ್ಮ ಕನ್ನಡ ಚಿತ್ರರಂಗದಲ್ಲಿ ತುಂಬಾ ಇವೆ. ಹಾಗೆ ಪ್ರೇಕ್ಷಕರು ಮೊದಲಿಗೆ, ಯಾವುದಾದರು ಹೊಸಬರ ಚಿತ್ರ ಬಿಡುಗಡೆ ಆಗಿದಾವೆ ಅಂದ್ರೆ, ಚಿತ್ರ ಚೆನ್ನಾಗಿಲ್ಲ ಎಂದು ನೋಡದೆ ಚಿತ್ರದ ಬಗ್ಗೆ ಅವರ ಅನಿಸಿಕೆ ತಿಳಿಸಿಬಿಡುತ್ತಿದ್ದರು, ತದನಂತರ ಚಿತ್ರ ಹಿಟ್ ಸಾಲಿಗೆ ಸೇರಿದಾಗ, ಓಹ್ ಈ ಚಿತ್ರ ಇಷ್ಟು ಚೆನ್ನಾಗಿದೆಯಾ ಎಂದು ಮಾತನಾಡಿ ಕೊಂಡದ್ದೂ ಉಂಟು.

ಅಷ್ಟಕ್ಕೂ ನಾವು ಏಕೆ ಹೊಸಬರ ಬಗ್ಗೆ ಹೇಳುತ್ತಿದ್ದೇವೆ ಗೊತ್ತಾ, ಪೂರ್ತಿ ಲೇಖನ ಓದಿ ನಿಮಗೆ ಗೊತ್ತಾಗುತ್ತದೆ, ಹೌದು, ನಾನೊಂಥರ ಎಂಬ ವಿಭಿನ್ನವಾಗಿ ಹೆಸರಿಟ್ಟುಕೊಂಡು ಒಂದು ಚಿತ್ರತಂಡ, ಚಿತ್ರದ ಎಲ್ಲಾ ಶೂಟಿಂಗ್ ಮುಗಿಸಿಕೊಂಡು ಇನ್ನೇನು ಬಿಡುಗಡೆಗೆ ಸಜ್ಜಾಗಿ ನಿಂತಿದೆ, ಅಂದ ಹಾಗೆ ಈ ಚಿತ್ರದಲ್ಲಿ ಕೂಡ ನಟಿಸಿರುವ ಎಲ್ಲರೂ ಕೂಡ ಹೊಸಬರೇ, ಯಾವುದೇ ಚಿತ್ರದಲ್ಲಿ ನಟನೆ ಮಾಡಿದ ಅನುಭವ ಇಲ್ಲದೆ ಹೋದರೂ ನಟ ಮತ್ತು ನಟಿ ಒಳ್ಳೆಯ ನಟನೆ ಮಾಡಿದ್ದಾರೆ, ಮತ್ತು ಚಿತ್ರತಂಡ ಈಗಾಗಲೇ ಯುಟ್ಯೂಬ್ ನಲ್ಲಿ ಮೂರು ಹಾಡುಗಳನ್ನು ಬಿಟ್ಟಿದ್ದು, ಎಲ್ಲಾ ಹಾಡುಗಳು ಕೇಳುಗರಿಗೆ ಮತ್ತು ನೋಡುಗರಿಗೆ ತುಂಬಾ ಇಷ್ಟ ಆಗಿವೆ.

ಮತ್ತು ಯುಟ್ಯೂಬ್ ನಲ್ಲಿ ಮೂರು ಹಾಡುಗಳು ಸಖತ್ ಸೌಂಡ್ ಮಾಡುತ್ತಾ ಮುನ್ನುಗ್ಗಿವೆ, ಹಾಗೆ ನಾನೊಂಥರ ಚಿತ್ರತಂಡ ಇನ್ನೇನು ಸ್ವಲ್ಪ ದಿನಗಳಲ್ಲೇ, ತನ್ನ ಕಡಕ್ ಟ್ರೈಲರ್ ಕೂಡ ಬಿಡುಗಡೆ ಮಾಡಲು ಸಜ್ಜಾಗಿದೆ, ಮತ್ತೆ ಚಿತ್ರಕ್ಕೆ ರಮೇಶ್ ಕಗ್ಗಲು ಅವರು ಆಕ್ಷನ್ ಕಟ್ ಹೇಳಿದ್ದಾರೆ, ಮತ್ತು ಡಾ. ಜಾಕ್ವಲೈನ್ ಫ್ರಾನ್ಸಿಸ್ ಅವರು ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ, ಹಾಗೆ ಡಾ. ಜಾಕ್ವಲೈನ್ ಫ್ರಾನ್ಸಿಸ್ ಅವರು ವೃತ್ತಿಯಲ್ಲಿ ವೈದ್ಯರಂತೆ, ಇನ್ನೂ ನಾಯಕನಾಗಿ ತಾರಕ್ ವಿ ಶೇಖರಪ್ಪ ಅವರು ಅಭಿನಯಿಸಿದ್ದಾರೆ ಜೊತೆಗೆ ನಟನ  ವೃತ್ತಿ ಕೂಡ ವೈದ್ಯ ವೃತ್ತಿಯಂತೆ, ಮತ್ತು ರಕ್ಷಿತಾ ಅವರು ನಾಯಕಿಯಾಗಿ ಅಭಿನಯ ಮಾಡಿದ್ದಾರೆ ಹಾಗೆ ಹಿರಿಯ ನಟ ದೇವರಾಜ್ ತಾರಾಗಣದಲ್ಲಿ ಚಿತ್ರ ಬರಲಿದೆ..

ಹೆಚ್ಚಾಗಿ ಹೊಸಬರನ್ನು ಆಯ್ಕೆ ಮಾಡಿಕೊಂಡು ಚಿತ್ರದ ಎಲ್ಲಾ ಶೂಟಿಂಗ್ ಮುಗಿದಿದ್ದು, ಈಗಾಗಲೇ ಮೂರು ಹಾಡುಗಳನ್ನು ಕೂಡ ಬಿಡುಗಡೆ ಮಾಡಿದ್ದು, ಇನ್ನೇನು ಸ್ವಲ್ಪ ದಿನಗಳಲ್ಲೇ ಥಿಯೇಟರ್ ಗೆ ಚಿತ್ರ ಬರಲಿದೆ, ಇಂಡಿಯಾದಲ್ಲಿ ಈ ಲಾಕ್ ಡೌನ್ ಮುಗಿದ ನಂತರ ನಾನೊಂಥರ ಚಿತ್ರ ಕರ್ನಾಟಕದಾದ್ಯಂತ ಬಿಡುಗಡೆ ಆಗಿ ಚಿತ್ರಮಂದಿರಗಳಲ್ಲಿ ಕಾಲಿಡಲಿದೇ, ಹಾಗೆ ಚಿತ್ರವನ್ನು ಎಲ್ಲರೂ ಚಿತ್ರಮಂದಿರಕ್ಕೆ ಹೋಗಿ ನೋಡಿ ಹೊಸಬರಿಗೆ ಪ್ರೋತ್ಸಾಹ ನೀಡಿ ಧನ್ಯವಾದಗಳು…