Welcome

ರಾತ್ರೋ ರಾತ್ರಿ ಪೆಟ್ರೋಲ್ ಬಂಕ್ ಗಳಿಗೆ ಮುಗಿಬಿದ್ದ ಜನ.?


ಕರ್ನಾಟಕದಲ್ಲಿ ಈ ಕರೋನಾ ವೈರಸ್ ಮಾಡ್ತಾ ಇರೋ ಅವಂತಾರ ಅಷ್ಟಿಷ್ಟಲ್ಲ. ಅದರಲ್ಲೂ ಕಲ್ಬುರ್ಗಿ ಜಿಲ್ಲೆಯ ಜನರಂತೂ ಈ ಕರೋನಾ ಹೆಸರು ಕೇಳಿ ನಿದ್ದೆಯಲ್ಲಿಯೂ ಕೂಡ ಬೆಚ್ಚಿ ನಿಲುವಂತ ಸ್ಥಿತಿ ಬಂದಿದೆ. ಇನ್ನು ಕಲ್ಬುರ್ಗಿ ಜಿಲ್ಲೆಯಾದ್ಯಂತ ಕರೋನಾ ತಡೆಗಾಗಿ ಜಿಲ್ಲಾಡಳಿತ ಹಲವು ಮುನ್ನೆಚ್ಚರಿಕೆ ಕ್ರಮಗಳನ್ನ ಕೈಗೊಳ್ಳುತ್ತಿದ್ದು, ಅರೋಗ್ಯ ತುರ್ತು ಪರಿಸ್ಥಿತಿ ಜಾರಿಮಾಡಲಾಗಿದೆ.

ಆದರೆ, ಇದರ ನಡುವೆ ಕರೋನಾ ಕುರಿತಾಗಿ ಸುಳ್ಳು ಸುದ್ದಿಗಳನ್ನು ಹಬ್ಬಿಸುವ ಕೆಲಸ ಹೆಚ್ಚಾಗಿದೆ. ಹೌದು, ಇಡೀ ಕಲ್ಬುರ್ಗಿ ಜಿಲ್ಲೆಯಾದ್ಯಂತ ಅರೋಗ್ಯ ತುರ್ತು ಪರಿಸ್ಥಿತಿ ಜಾರಿಯಾಗಿದ್ದರೂ ಇದು ಪೆಟ್ರೋಲ್ ಬಂಕ್ ಗಳಿಗೆ ಅನ್ವಯ ಆಗೋದಿಲ್ಲ. ಆದರೆ ಯಾರೋ ಕಿಡಿಗೇಡಿಗಳು ಪೆಟ್ರೋಲ್ ಬುನಿಕ್ ಬಂದ್ ಆಗುತ್ತೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಮಂಗಳವಾರ ವಾರ ರಾತ್ರಿಯೆಂದು ಫೇಕ್ ಸುದ್ದಿಗಳನ್ನ ಹಬ್ಬಿಸಿದ್ದಾರೆ.

ಇನ್ನು ಈ ಸುಳ್ಳು ಸುದ್ದಿಯಿಂದಾಗಿ ಪೆಟ್ರೋಲ್ ಸಿಗುತ್ತೋ ಇಲ್ಲೋ ಎಂಬ ಭಯದಿಂದ ಸಾರ್ವಜನಿಕರು ಒಂದೇ ನ ಮುಂದು ತಾ ಮುಂದು ಅಂತ ಪೆಟ್ರೋಲ್ ಬಂಕ್ ಗಳಿಗೆ ಮುಗಿಬಿದ್ದಿದ್ದು, ಪೆಟ್ರೋಲ್ ಫುಲ್ ಟ್ಯಾಂಕ್ ಮಾಡಿಸಿಕೊಂಡಿದ್ದಾರೆ. ಆದರೆ ಸರ್ಕಾರವಾಗಲಿ, ಜಿಲ್ಲಾಡಳಿತವಾಗಲಿ ಪೆಟ್ರೋಲ್ ಬಂಕ್ ಗಳನ್ನ ಬಂದ್ ಮಾಡಿಲ್ಲ. ಆದರೆ ಕೆಲವರು ಸೋಷಿಯಲ್ ಮೀಡಿಯಾಗಳಲ್ಲಿ ಪೆಟ್ರೋಲ್, ಡೀಸೆಲ್ ಸಿಗೋಲ್ಲ ಎಂದು ಸುಳ್ಳು ಸುದ್ದಿಯನ್ನ ಹಬ್ಬಿಸಿದ್ದಾರೆ.

ಇದರಿಂದ ಭಯಗೊಂಡಿರುವ ಜನ ಸಾಲಿನಲ್ಲಿ ನಿಂತು ಬೈಕ್ ಗಳಿಗೆ ಪೆಟ್ರೋಲ್ ತುಂಬಿಸಿಕೊಳ್ಳುತ್ತಿರುವುದಲ್ಲದೆ, ವಾಟರ್ ಬಾಟಲ್ ಗಳಲ್ಲಿಯೂ ಕೂಡ ಪೆಟ್ರೋಲ್ ತುಂಬಿಸಿಕೊಂಡು ಹೊಗ್ಗುತ್ತಿದ್ದಾರೆ. ಒಟ್ಟಿನಲ್ಲಿ ಈ ಸುಳ್ಳು ಸುದ್ದಿಯಿಂದ ಲಾಭವಾಗಿದ್ದು ಮಾತ್ರ ಬಂಕ್ ಮಾಲೀಕರಿಗೆ.