Welcome

ಕಮರಿಹೋಯ್ತಾ ಕುಮಾರಣ್ಣನ ಆಸೆ..ಬೆಂಗಳೂರಿಗೆ ಶಿಫ್ಟ್ ಆಯ್ತು ನಿಖಿಲ್ ಮದುವೆ.?


ಮಾಜಿ ಮುಖ್ಯಮಂತ್ರಿಗಳಾದ ಕುಮಾರಸ್ವಾಮಿಯವರ ಪುತ್ರ ಸ್ಯಾಂಡಲ್ವುಡ್ ಯುವರಾಜ ನಿಖಿಲ್ ಕುಮಾರಸ್ವಾಮಿ ಅವರ ಮದುವೆ ಮುಂದಿನ ತಿಂಗಳು ಏಪ್ರಿಲ್ ೧೭ರಂದು ರಾಮನಗರ ಬಳಿ ನಡೆಯಬೇಕಿತ್ತು. ಆದರೆ ಕೊರೋನಾ ಭೀತಿಯಿಂದಾಗಿ ಕ್ಯಾನ್ಸಲ್ ಆಗಿದೆ.

ಹೌದು, ಈಗಂತೂ ಎಲ್ಲೆಲ್ಲೂ ಮಹಾಮಾರಿ ಕೊರೋನಾ ವೈರಸ್ ರಣ ಕೇಕೆ ಹಾಕುತ್ತಿದೆ. ದಿನದಿಂದ ದಿನಕ್ಕೆ ಹೇಚ್ಚಾಗುತ್ತಿದೆಯೇ ಹೊರತು ಕಂಟ್ರೋಲ್ ಗೆ ಸಿಗುತ್ತಿಲ್ಲ. ಇನ್ನು ರಾಮನಗರದ ಬಳಿ ಇರುವ ಜಾನಪದ ಲೋಕದಲ್ಲಿ ನಿಖಿಲ್ ಮದುವೆ ಅದ್ದೂರಿಯಾಗಿ ನಡೆಯಬೇಕಿತ್ತು. ಇದಕ್ಕಾಗಿ ಅದ್ದೂರಿ ಕಲ್ಯಾಣಮಂಟಪದಿಂದ ಹಿಡಿದು ಪ್ರತಿಯೊಂದು ಕೆಲಸಗಳು ನಡೆಯುತ್ತಿದ್ದವು.

ಜೊತೆಗೆ ಆರೇಳು ಕೊಳವೆ ಬಾವಿಗಳನ್ನ ಕೂಡ ಕೊರೆಸಲಾಗಿತ್ತು. ಇನ್ನು ಮುಂಬೈನಿಂದ ಬಂದಿದ್ದ ತಂಡವೊಂದು ಅದ್ದೂರಿ ಕಲ್ಯಾಣ ಮಂಟಪ ನಿರ್ಮಿಸುವ ಕೆಲಸದಲ್ಲಿ ತೊಡಗಿದ್ದರು. ಆದರೆ ಈಗ ನಿಖಿಲ್ ಮದುವೆಯನ್ನ ರಾಮನಗರದಿಂದ ಬೆಂಗಳೂರಿನ ಅರಮನೆ ಮೈದಾನಕ್ಕೆ ಶಿಫ್ಟ್ ಮಾಡಲಾಗಿದೆ.

ಇನ್ನು ಕುಮಾರಣ್ಣ ತಾನು ರಾಜಕೀಯವಾಗಿ ಇಷ್ಟು ಎತ್ತರಕ್ಕೆ ಬೆಳೆಯಲು ರಾಮನಗರ ಮತ್ತು ಚನ್ನಪಟ್ಟಣದ ಜನರೇ ಕಾರಣ. ಅವರ ಋಣ ನನ್ನ ತಲೆಯ ಮೇಲಿದೆ.ಅವರೆಲ್ಲಾ ನಿಖಿಲ್ ಮದುವೆಗೆ ಬಂದು ಆಶೀರ್ವಾದ ಮಾಡಬೇಕು. ಇದು ನನ್ನ ಆಸೆ ಎಂದು ಹೇಳಿದ್ದರು. ಜೊತೆಗೆ ಮನೆ ಮನೆಗೆ ಹಂಚಲೆಂದು ೮ ಲಕ್ಷಕ್ಕಿಂತ ಹೆಚ್ಚು ಲಗ್ನಪತ್ರಿಕೆಗಳನ್ನ ಪ್ರಿಂಟ್ ಮಾಡಿಸಿ ಅದರಲ್ಲಿ ಸ್ಥಳದ ಹೆಸರನ್ನ ಕೂಡ ಹಾಕಿಸಿದ್ದರು. ಇನ್ನು ಆಹ್ವಾನ ಪತ್ರಿಕೆಯ ಜೊತೆಗೆ ಹರಿಶಿನ, ಕುಕುಮ, ಸೀರೆ, ಬಟ್ಟೆಗಳು ಸೇರಿದಂತೆ ಜನರಿಗೆ ಉಡುಗೊರೆಯಾಗಿ ನೀಡಲು ತೀರ್ಮಾನ ಮಾಡಿದ್ದರು.

ಆದರೆ ಈ ಕೊರೋನಾ ಸೋಂಕಿನಿಂದಾಗಿ ಈಗ ಕುಮಾರಣ್ಣ ಕಂಡ ಕನಸು ಭಗ್ನವಾಗಿದೆ. ಹೌದು, ರಾಮನಗರ ಮತ್ತು ಚನ್ನಪಟ್ಟಣದ ಜನರ ಋಣ ತೀರಿಸಬೇಕು ಎಂದು ಕೊಂಡಿದ್ದು, ಅವರೆಲ್ಲಾ ಬಂದು ತನ್ನ ಮಗನಿಗೆ ಆಶೀರ್ವಾದ ಮಾಡಬೇಕೆಂದು ಬಯಸಿದ್ದ ಕುಮಾರಣ್ಣನ ಆಸೆ ಈಗ ನುಚ್ಚು ನೂರಾಗಿದೆ. ಮದುವೆಗೆ ಹೆಚ್ಚು ಜನ ಸೇರುವ ಸಾಧ್ಯತೆ ಇರುವುದರಿಂದ ಕೊರೋನಾ ಸೋಂಕು ಹರಡುವ ಭೀತಿ ಎದುರಾಗಿದ್ದು, ಜನರ ಆರೋಗ್ಯ ದೃಷ್ಟಿಯಿಂದ ರಾಮನಗರದಲ್ಲಿ ನಡೆಯಬೇಕಿದ್ದ ಮದುವೆಯನ್ನ ಕ್ಯಾನ್ಸಲ್ ಮಾಡಿ, ಬೆಂಗಳೂರಿನಲ್ಲಿ ಮಾಡುವ ಯೋಚನೆ ಮಾಡಿದ್ದು ರಾಮನಗರದಲ್ಲಿ ಹಾಕಿಸಿದ್ದ ಶೆಲ್ಟರ್ ಗಳನ್ನೆಲ್ಲಾ ಬೆಂಗಳೂರಿಗೆ ಶಿಫ್ಟ್ ಮಾಡಿದ್ದಾರೆ.

ಆದರೆ ಈಗ ಬೆಂಗಳೂರಿನಲ್ಲೂ ಸಹ ದಿನದಿಂದ ದಿನಕ್ಕೆ ಕೊರೋನಾ ಸೋಂಕಿತರ ಸಂಖ್ಯೆ ಜಾಸ್ತಿಯಾಗುತ್ತಿದ್ದು ನಿಖಿಲ್ ಮದುವೆಯನ್ನ ಅದ್ದೂರಿಯಾಗಿ ಮಾಡಲು ಕಷ್ಟ ಸಾಧ್ಯ. ಒಂದು ವೇಳೆ ಬೆಂಗಳೂರಿನಲ್ಲಿ ಕೊರೋನಾ ಕಾಟ ಜಾಸ್ತಿಯಾದ್ರೆ ಸರಳವಾಗಿ ನಿಖಿಲ್ ಮದುವೆಯನ್ನ ಮುಗಿಸಿ, ಈ ಸೋಂಕು ತಣ್ಣಗಾದ ಮೇಲೆ ಅದ್ದೂರಿಯಾಗಿ ಆರತಕ್ಷತೆ ಮಾಡುತ್ತಾರಾ ಎಂದು ಕಾದು ನೋಡಬೇಕಾಗಿದೆ.