Welcome

ಕೊರೋನಾ ಹಿನ್ನಲೆ ಸಾವಿರಾರು ಲೀಟರ್ ಹಾಲನ್ನ ನದಿಗೆ ಚೆಲ್ಲಿದ್ರು..ಎಂತಾ ಜನ ನೀವು..


ದಿನದಿಂದ ದಿನಕ್ಕೆ ಇಡೀ ದೇಶದೆಲ್ಲೆಡೆ ತನ್ನ ಕಬಂದ ಬಾಹುಗಳನ್ನ ವಿಸ್ತರಿಸುತ್ತಿರುವ ಈ ಕೊರೋನಾ ವೈರಸ್ ಶ್ರೀಸಾಮಾನ್ಯರ ಮೇಲೆ ಬಹಳ ಪ್ರಭಾವ ಬೀರಿದೆ. ಅದರಲ್ಲೂ ಹಾಲು ಖರೀದಿ ಮಾಡಿ ಮಾರುವವರ ಪರಿಸ್ಥಿತಿ ಚಿಂತಾಜನಕವಾಗಿದೆ.

ಹೌದು, ಬರೋಬ್ಬರಿ 1500ಲೀ ಹಾಲನ್ನ ನದಿಗೆ ಸುರಿದಿರುವ ಘಟನೆ ಚಿಕ್ಕೋಡಿಯಲ್ಲಿ ನಡೆದಿದೆ. ಯುವಕರು ಹಳ್ಳಿಗಳಲ್ಲಿ ಮನೆ ಮನೆಗೆ ಹೋಗಿ 35ರೂಗಳನ್ನ ಕೊಟ್ಟ ಹಾಲಿನ ಖರೀದಿ ಮಾಡುತ್ತಿದ್ದರು. ಬಳಿಕ ನಗರಕ್ಕೆ ಹೋಗಿ ಪ್ರತೀ ಲೀಟರ್ ಗೆ ಐದಾರು ರೂಪಾಯಿಗಳ ಲಾಭದಲ್ಲಿ ಮಾರುತ್ತಿದ್ದರು. ಇದು ಅವರ ದಿನನಿತ್ಯದ ವ್ಯವಹಾರವಾಗಿತ್ತು.

ಆದರೆ ಕೊರೋನಾ ಸೋಂಕಿನ ಹಿನ್ನಲೆಯಲ್ಲಿ ಹಾಲನ್ನ ಮಾರಲು ಸಿಟಿಗೆ ಹೋದ ಯುವಕರಿಗೆ ಶಾಕ್ ಆಗಿದೆ. ಹೌದು, ಪ್ರತೀ ಲೀಟರ್ ಹಾಲಿಗೆ ೧೦ರೂಗಳನ್ನ ಕೊಡುವುದಾಗಿ ಗ್ರಾಹಕರು ಹೇಳಿದ್ದಾರೆ. ಆದರೆ ಇದರಿಂದ ಕೋಪಗೊಂಡ ಯುವಕರು ನಿಮ್ಮ 10ರೂಪಾಯಿ ಕೂಡ ಬೇಡ ಎಂದು ಬರೋಬ್ಬರಿ 1500ಲೀಟರ್ ಹಾಲನ್ನ ತೆಗೆದುಕೊಂಡು ಹೋಗಿ ಘಟಪ್ರಭಾ ನದಿಗೆ ಸುರಿದಿದ್ದಾರೆ.

ಇನ್ನು ಇದರಲ್ಲಿ ಗ್ರಾಹಕರ ತಪ್ಪೋ, ಇಲ್ಲ ಈ ಯುವಕರ ತಪ್ಪೂ ಗೊತ್ತಿಲ್ಲ. ಬರೋಬ್ಬರಿ ೧೫೦೦ಲೀ ಹಾಲು ನೀರಿಗೆ ಸೇರಿದಂತೂ ಬೇಜಾರಿನ ಸಂಗತಿ. ಆ ಯುವಕರು ಸ್ವಲ್ಪ ಯೋಚನೆ ಮಾಡಿ ಆ ಹಾಲನ್ನ ನಿರ್ಗತಿಕರಿಗೆ, ಭಿಕ್ಷುಕರಿಗೆ ಕೊಡಬಹುದಿತ್ತು, ಇಲ್ಲವೇ ನಿಮ್ಮ ೧೦ರೂಪಾಯಿ ಬೇಡ ಅಂತ ಹೇಳಿ ಅದೇ ಗ್ರಾಹಕರಿಗೆ ಉಚಿತವಾಗಿ ಕೊಟ್ಟಿದ್ದಾರೆ ಅವರಿಗೆ ಅದರ ಬೆಲೆ ಅರ್ಥವಾಗುತ್ತಿತ್ತು. ಆದರೆ ಈ ಯುವಕರು ಕೋಪಗೊಂಡು ಅಷ್ಟೊಂದು ಲೀಟರ್ ಹಾಲನ್ನ ವೆಸ್ಟ್ ಮಾಡಿದ್ದೂ ದೊಡ್ಡ ತಪ್ಪು. ಇನ್ನು ಈ ಯುವಕರು ಹಾಲಿನ ವಿಷಯದಲ್ಲಿ ಮಾಡಿದ್ದು ಸರಿಯೇ.?ನಿಮ್ಮ ಅಭಿಪ್ರಾಯ ತಿಳಿಸಿ ಹಾಗೂ ಶೇರ್ ಮಾಡಿ..