Welcome

ಲವ್ ಮಾಕ್ಟೈಲ್ ಚಿತ್ರ ನೋಡಿ ಬೇಸರಗೊಂಡು ನಟನ ಬ್ಯಾಂಕ್ ಖಾತೆಗೆ ಹಣ ಕಳುಹಿಸಿದ ಅಭಿಮಾನಿ..


ಕನ್ನಡಿಗರೇ ಕನ್ನಡ ಚಿತ್ರಗಳನ್ನ ನೋಡಿ, ಪರಭಾಷೆ ಚಿತ್ರಗಳೊಂದಿಗೆ ಹೋಲಿಸಿ ಮಾತನಾಡುವ ಕಾಲಹೊಂದಿತ್ತು. ಆದರೆ ಕೆಜಿಎಫ್ ಚಿತ್ರ ಬಂದ ಮೇಲೆ ಇಡೀ ಭಾರತೀಯ ಚಿತ್ರರಂಗ ಸ್ಯಾಂಡಲ್ವುಡ್ ಕಡೆ ನೋಡುವಂತಾಗಿದೆ.

ಹೌದು, ಇನ್ನು ಇತ್ತೀಚಿಗೆ ಕನ್ನಡ ಚಿತ್ರರಂಗದಲ್ಲಿ ಉತ್ತಮ ಕಮರ್ಷಿಯಲ್ ಚಿತ್ರಗಳ ಜೊತೆಗೆ ಪ್ರಯೋಗಾತ್ಮಕ ಚಿತ್ರಗಳು ಬರುತ್ತಿರುವುದು ಒಳ್ಳೆಯ ಬೆಳವಣಿಗೆ. ಜೊತೆಗೆ ಚಿತ್ರರಸಿಕರ ಮೆಚ್ಚುಗೆ ಗಳಿಸುವಲ್ಲಿ ಕೂಡ ಹಿಂದೆ ಬಿದ್ದಿಲ್ಲ.

ಈಗ ಇದಕ್ಕೊಂದು ತಾಜಾ ಉದಾಹರಣೆ ಎಂದರೆ ಡಾರ್ಲಿಂಗ್ ಕೃಷ್ಣ ನಿರ್ದೇಶನದಲ್ಲಿ ಮೂಡಿ ಬಂದ ಲವ್ ಮಾಕ್ಟೈಲ್ ಚಿತ್ರ. ಇನ್ನು ಜನವರಿ ೩೧ರಂದು ಬಿಡುಗಡೆಯಾದ ಈ ಚಿತ್ರಮಂದಿರಗಳಲ್ಲಿ ಬಿಡುಗಡೆಯಾದ ಈ ಚಿತ್ರಕ್ಕೆ ಅಮೆಜಾನ್ ಪ್ರೀಮಿಯರ್ ವಿಡಿಯೋದಲ್ಲಿ ಸೇರಿದಂತೆ ಎಲ್ಲಾ ಕಡೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.

ಇನ್ನು ಸಾಮಾಜಿಕ ಜಾಲತಾಣಗಳಲ್ಲಿ ಲವ್ ಮಾಕ್ಟೈಲ್ ಚಿತ್ರ ಸಖತ್ ಕ್ರೇಜ್ ಹುಟ್ಟು ಹಾಕಿದ್ದು, ಸಿನಿಮಾ ಚೆನ್ನಾಗಿದ್ದರೆ ಕನ್ನಡಿಗರು ಕೈ ಬಿಡುವುದಿಲ್ಲ ಎಂಬುದಕ್ಕೆ ಈ ಚಿತ್ರವೇ ಒಂದು ತಾಜಾ ಉದಾಹರಣೆ. ಆದರೆ ಹೊಸಬರು ಮಡಿದ ಚಿತ್ರ ಬಂದರೆ ನಮ್ಮ ಜನರು ಅಸಡ್ಡೆ ತೋರಿಸುವುದು ಮಾಮೂಲು. ಹಾಗಾಗಿಯೇ ಲವ್ ಮಾಕ್ಟೈಲ್ ಚಿತ್ರ ಬಿಡುಗಡೆಯಾದಾಗ ಜನರು ಹೆಚ್ಚಾಗಿ ಚಿತ್ರಮಂದಿರಗಳ ಕಡೆ ಹೋಗಲಿಲ್ಲ.

ಆದರೆ ನಂತರದ ದಿನಗಳಲ್ಲಿ ಚಿತ್ರ ಚೆನ್ನಾಗಿದೆಯೆಂದು ಸಾಮಾಜಿಕ ಜಾಲತಾಣ ಗಳಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಹೌಸ್ ಫುಲ್ ಆಗಿ ಪ್ರದರ್ಶನವಾಯಿತು. ಜೊತೆಗೆ ಮೊಬೈಲ್ ಗಳಲ್ಲಿಯೂ ಕೂಡ ಜೋರಾಗಿಯೇ ಈ ಚಿತ್ರ ಹರಿದಾಡಿತು. ಇನ್ನು ಮೊಬೈಲ್ ನಲ್ಲಿ ಲವ್ ಮಾಕ್ಟೈಲ್ ಚಿತ್ರ ನೋಡಿದ ವ್ಯಕ್ತಿಯೊಬ್ಬ, ಇಂತಹ ಉತ್ತಮವಾದ ಚಿತ್ರವನ್ನ ಸಿನಿಮಾ ಥಿಯೇಟರ್ ನಲ್ಲಿ ನೋಡಲಿಲ್ಲ ಎಂದು ಬೇಸರಪಟ್ಟು ನಟ ನಿರ್ದೇಶಕ ಡಾರ್ಲಿಂಗ್ ಕೃಷ್ಣ ಅವರ ಖಾತೆಗೆ ೩೦೦ರೂಪಾಯಿಗಳ ಹಣವನ್ನ ಕಳಿಸಿದ್ದಾರೆ.

ಇನ್ನು ಇದರ ಬಗ್ಗೆ ಸ್ವತಃ ನಟ ಕೃಷ್ಣರವರೇ ಹೇಳಿಕೊಂಡಿದ್ದು, ಟ್ವೀಟ್ ಮಾಡಿದ್ದಾರೆ. ಲವ್ ಮಾಕ್ಟೈಲ್ ಚಿತ್ರವನ್ನ ಥಿಯೇಟರ್ ನಲ್ಲಿ ನೋಡಲು ಆಗಲಿಲ್ಲವಲ್ಲಾ ಎಂದು ಬೇಸರಪಟ್ಟುಕೊಂಡ ಸಾವಿರಾರು ಮೆಸೇಜ್ ಗಳು ನನಗೆ ಬರುತ್ತಿವೆ. ಅವರೆಲ್ಲಾ ಹಣ ಕೊಡಕ್ಕೆ ಕೂಡ ರೆಡಿಯಾಗಿದ್ದಾರೆ. ಅದರಲ್ಲಿ ಸುನಿಲ್ ಕುಮಾರ ಎಂಬ ಅಭಿಮಾನಿ ನನಗೆ ಟ್ವೀಟ್ ಮಾಡಿ ನನ್ನ ಅಕೌಂಟ್ ನಂಬರ್ ಕೇಳಿದ್ದರು.

ನಾನು ತಮಾಷೆ ಮಾಡುತ್ತಾರೆ ಎಂದು, ಸುಮ್ಮನೆ ಕಳುಹಿಸಿ ನೋಡೋಣ ಎಂದು ಅಕೌಂಟ್ ನಂಬರ್ ಕೊಟ್ಟೆ. ಆದರೆ ಆ ಅಭಿಮಾನಿ ನಿಜವಾಗಲೂ ೩೦೦ರೂಗಳ ಹಣವನ್ನ ನನ್ನ ಖಾತೆಗೆ ಜಮಾ ಮಾಡಿದ್ದಾರೆ. ಇನ್ನು ಇಂತಹ ಅಭಿಮಾನದ ಮುಂದೆ ನಾವು ತಲೆಬಾಗಲೇಬೇಕು. ನಾನು ಯಾವಾಗಲು ಚಿರಋಣಿಯಾಗಿರುತ್ತೇನೆ ಎಂದು ಕೃಷ್ಣ ಹೇಳಿದ್ದಾರೆ. ಜೊತೆಗೆ ಲವ್ ಮಾಕ್ಟೈಲ್ ಭಾಗ ೨ಬರಲಿದ್ದು ಚಿತ್ರದ ಕತೆ ಬರೆಯುತ್ತಿದ್ದೇನೆ ಎಂದು ಡಾರ್ಲಿಂಗ್ ಕೃಷ್ಣ ಹೇಳಿದ್ದಾರೆ.