Welcome

ಮತ್ತೆ ಮುಂದುವರಿದ ಕರ್ನಾಟಕ ಲಾಕ್ ಡೌನ್.ಎಷ್ಟು ದಿನ ಗೊತ್ತಾ?ರೆಡಿಯಾಗಿದೆ ಕೊರೋನಾ ಟಾಸ್ಕ್ ಫೋರ್ಸ್..


ಜಗತ್ತಿನಲ್ಲೆಡೆ ವ್ಯಾಪಕವಾಗಿ ಹರಡುತ್ತಿರುವ ಕೊರೋನಾ ವೈರಸ್, ಕರ್ನಾಟಕದ್ಲಲೂ ಕೂಡ ದಿನದಿಂದ ದಿನಕ್ಕೆ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದ್ದು, ಈಗಾಗಲೇ ಒಂದು ವಾರಗಳ ಕಾಲ ಕರ್ನಾಟಕ ಲಾಕ್ ಮಾಡಲಾಗಿದೆ.

ಚಿತ್ರಮಂದಿರಗಳು, ಮಾಲ್ ಗಳು, ಪಬ್ ಗಳು, ಮದುವೆ ಸಮಾರಂಭಗಳು, ಸ್ವೀಮಿಗ್ ಪೂಲ್, ಸಮ್ಮರ್ ಕ್ಯಾಂಪ್ ಗಳು ಸೇರಿದಂತೆ ಜಾತ್ರೆಗಳನ್ನ ಕೂಡ ಒಂದು ವಾರ ಬಂದ್ ಮಾಡುವಂತೆ ಸರ್ಕಾರ ನಿರ್ಬಂಧ ಹೇರಿತ್ತು. ಈಗ ಮತ್ತೆ ಕೊರೋನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿರುವ ಹಿನ್ನಲೆಯಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪನವರ ನೇತೃತ್ವದಲ್ಲಿ ತುರ್ತು ಸಭೆ ನಡೆಸಲಾಯಿತು.

ಇನ್ನು ಮಾರ್ಚ್ 31ನೇ ದಿನಾಂಕದವರೆಗೆ ಸಿನಿಮಾ ಥಿಯೇಟರ್ ಗಳು, ಮಾಲ್ ಗಳು, ಪಬ್ ಗಳು, ಸಮ್ಮರ್ ಕ್ಯಾಂಪ್ ಗಳನ್ನ ಸಭೆ ಸಮಾಂಭಗಳನ್ನ ಬಂದ್ ಮಾಡಲಾಗಿದ್ದು, ಮದುವೆ ಸಮಾರಂಭ, ಜಾತ್ರೆಗಳ ಮೇಲೆ ನಿರ್ಬಂಧ ಹೇರಲಾಗಿದೆ ಎಂದು ಸಭೆಯಲ್ಲಿ ತೀರ್ಮಾನ ತೆಗೆದುಕೊಳ್ಳಲಾಗಿದೆ.

ಇನ್ನು ಕೊರೋನಾ ತಡೆಗೆ ೨೦೦ಕೋತಿ ರೂಪಾಯಿಗಳ ಹಣ ಬಿಡುಗಡೆ ಮಾಡಲಾಗಿದ್ದು, ಸಚಿವರಾಗಿರುವ ಶ್ರೀರಾಮುಲು,ಸುಧಾಕರ್, ಬಸವರಾಜ್ ಬೊಮ್ಮಾಯಿ ಹಾಗೂ ಅಶ್ವಥ್ ನಾರಾಯಣರವರ ನೇತೃತ್ವದಲ್ಲಿ ಟಾಸ್ಕ್ ಫೋರ್ಸ್ ರಚಿಸಲಾಗಿದೆ. ಇನ್ನು ಪ್ರತೀದಿನ ಈ ತಂಡದ ನಾಲ್ಕು ಸಚಿವರು ಕೊರೋನಾ ಸೋಂಕಿನ ಬಗ್ಗೆ ಮಾಹಿತಿ ನೀಡಲಿದ್ದಾರೆ ಎಂದು ಹೇಳಲಾಗಿದೆ.