Welcome

ಇನ್ನೆರಡೇ ದಿನಗಳಲ್ಲಿ ಬಂದ್ ಆಗಲಿವೆ ಎಲ್ಲಾ ಸೀರಿಯಲ್ ಗಳು.?


ಇಡೀ ಜಗತ್ತಿನಲ್ಲಿ ಸದ್ಯದ ಮಟ್ಟಿಗೆ ಕೊರೋನಾ ವೈರಸ್ ನದ್ದೇ ಆಟ. ಇದರ ಹಾವಳಿಗೆ ಇಡೀ ಜಗತ್ತಿಗೆ ಜಗತ್ತೇ ತತ್ತರಿಸಿ ಹೋಗಿದೆ. ಇನ್ನು ಈ ಸೋಂಕಿನ ಭೀತಿಯ ಹಿನ್ನಲೆಯಲ್ಲಿ ದಿನದಿಂದ ದಿನಕ್ಕೆ ಒಂದೊಂದೇ ಬಂದ್ ಆಗುತ್ತಿದೆ.

ಇನ್ನು ಈಗಾಗ್ಲೇ ಕರ್ನಾಟಕದಲ್ಲಿ ಮಾರ್ಚ್ ೩೧ರವರೆಗೆ ಚಲನಚಿತ್ರಮಂದಿರಗಳು ಸೇರಿದಂತೆ ಮಾಲ್ ಗಳನ್ನ ಬಂದ್ ಮಾಡಲಾಗಿದೆ. ಸಭೆ ಸಮಾರಂಭಗಳನ್ನ, ಜಾತ್ರೆಗಳನ್ನ ಮಾಡದಂತೆ ನಿಷೇಧ ಹೇರಲಾಗಿದೆ. ಈಗ ಇದರ ನಡುವೆ ಮನೆಯಲ್ಲಿಯೇ ಕುಳಿತು ತಮ್ಮ ನೆಚ್ಚಿನ ಧಾರಾವಾಹಿಗಳನ್ನ ನೋಡುವವರೆಗೂ ಕೊರೋನಾ ಒಡೆತ ಬಿದ್ದಿದೆ.

ಹೌದು, ಎಲ್ಲೆಲ್ಲೂ ನಾನೇ ಎಂದು ಮೆರೆಯುತ್ತಿರುವ ಕೊರೋನಾ ಸೋಂಕಿನ ಭಯಕ್ಕೆ ಧಾರಾವಾಹಿಗಳ ಚಿತ್ರೀಕರಣ ಬಂದ್ ಆಗಲಿದ್ದು, ಮುಂದಿನ ಇನ್ನೆರಡು ದಿನಗಳಲ್ಲಿ ಟಿವಿಯಲ್ಲಿ ಪ್ರಸಾರವಾಗುತ್ತಿರುವ ಧಾರಾವಾಹಿಗಳು ಬಂದ್ ಆಗಲಿವೆ.

ಸೀರಿಯಲ್ ಪ್ರಿಯರಿಗೆ ಸ್ಯಾಡ್ ನ್ಯೂಸ್ ಕೊಟ್ಟಿರುವ ಟೆಲಿವಿಷನ್ ಅಸೋಸಿಯೇಷನ್ ಮಾರ್ಚ್ 22 ರಿಂದ ಏಪ್ರಿಲ್ 1ರ ತನಕ ಸೀರಿಯಲ್ ಚಿತ್ರಕರಣ ನಿಲ್ಲಿಸುವುದಾಗಿ ಹೇಳಿದೆ. ಇನ್ನು ಶೂಟಿಂಗ್ ಸಮಯದಲ್ಲಿ ಹೆಚ್ಚೆಚ್ಚು ಜನರು ಸೇರುವ ಕರಣ ಕೊರೋನಾ ಭೀತಿ ಎದುರಾಗಲಿದ್ದು, ಯಾರಿಗೂ ತೊಂದರೆಯಾಗುವುದು ಬೇಡ ಎಂದು ಈ ನಿರ್ಧಾರವನ್ನ ತೆಗೆದುಕೊಂಡಿರುವುದಾಗಿ ಟೆಲಿವಿಷನ್ ಅಸೋಸಿಯೇಷನ್ ಹೇಳಿದೆ.

ಒಟ್ಟಿನಲ್ಲಿ ಎಲ್ಲೆಲ್ಲೂ ನಾನೇ, ಎಲ್ಲೆಲ್ಲೂ ನಾನೆ ಎಂದು ಮೆರೆಯುತ್ತಿರುವ ಈ ಕೊರೋನಾ ಮನೆಯಲ್ಲಿ ನೆಮ್ಮದಿಯಿಂದ ಕುಳಿತು ಸೀರಿಯಲ್ ನೋಡಿ ಮನರಂಜನೆ ಪಡೆಯುತ್ತಿದವರಿಗೂ ಕೂಡ ಕಂಟಕವಾಗಿ ಪರಿಣಮಿಸಿದೆ. ಜಗತ್ತಿನಲ್ಲಿ ನನ್ನದೇ ಆಟ ಎಂದು ಮೆರೆಯುತ್ತಿರುವ ಈ ವೈರಸ್ ಮುಂದೆ ಏನೆಲ್ಲಾ ಹಾವಳಿ ಮಾಡಲಿದೆ ಎಬುದನ್ನ ಕಾದು ನೋಡಬೇಕಾಗಿದೆ.