Welcome

ಹೆಂಡತಿಯನ್ನು ಹೆಗಲ ಮೇಲೆ ಹೊತ್ತುಕೊಂಡು ಬರೋಬ್ಬರಿ 257ಕಿಮೀ ನಡೆದ ಪತಿ..


ಕೊರೋನಾ ಸೋಂಕು ಹಿನ್ನಲೆಯಲ್ಲಿ ಇಡೀ ಭಾರತ ಲಾಕ್ ಡೌನ್ ಆಗಿದ್ದು, ರೈಲು ಸಂಚಾರ ಸೇರಿದಂತೆ, ಬಸ್ ಗಳನ್ನೂ ಕೂಡ ಬಂದ್ ಮಾಡಲಾಗಿದೆ. ಜೊತೆಗೆ ಜಿಲ್ಲೆಯ ಎಲ್ಲಾ ಗಡಿಗಳನ್ನು ಕೂಡ ಬಂದ್ ಮಾಡಲಾಗಿದ್ದು, ಜನ ಎಲ್ಲೆಲ್ಲಿ ಇದ್ದರೋ ಅಲ್ಲೇ ಇರುವಂತಾಗಿದೆ.

ಇದರ ನಡುವೆ ಪತಿಯೊಬ್ಬ ತನ್ನ ಪತ್ನಿಯನ್ನ ಹೆಗಲ ಮೇಲೆ ಹೊತ್ತು ಬರೋಬ್ಬರಿ ೨೫೭ ಕಿಮೀ ನಡೆದಕೊಂಡು ಹೋಗಿದ್ದಾರೆ. ಹಾಗಿದ್ದರೆ ಏನಿದು ಸ್ಟೋರಿ ಮಿಂದೆ ನೋಡೋಣ ಬನ್ನಿ..

ಕೊರೋನಾ ಸೋಂಕಿನ ಹಿನ್ನಲೆಯಲ್ಲಿ ಯಾವುದೇ ಬಸ್ ಆಗಲಿ ಗಾಡಿಗಳಾಗಲಿ ಓಡಾಡುತ್ತಿಲ್ಲ. ಇನ್ನು ಇದೆ ಸಮಯದಲ್ಲಿ ಪತಿ ಪತ್ನಿಯೊಬ್ಬರು ಅಹಮದಾಬಾದ್ ನಿಂದ ಬಾಂಸವಾಡಕ್ಕೆ ಪ್ರಯಾಣ ಬೆಳೆಸಿದ್ದಾರೆ. ಆದರೆ ಆತನ ಪತ್ನಿಯ ಕಾಲಿಗೆ ಗಾಯವಾಗಿದ್ದು ನಡೆಯಲಾಗುತ್ತಿರಲಿಲ್ಲ. ಇನ್ನು ಆ ದಂಪತಿಯ ಬಳಿ ಬೈಕ್ ಸೇರಿದಂತೆ ಯಾವುದೇ ರೀತಿಯ ವಾಹನವೂ ಸಹ ಇಲ್ಲ.

ಹೀಗಾಗಿ ಆತ ತನ್ನ ಪತ್ನಿಯನ್ನ ಹೆಗಲ ಮೇಲೆ ಹೊತ್ತುಕೊಂಡು ಬರೋಬ್ಬರಿ 257ಕಿಮೀ ದೂರ ಸಾಗಿದ್ದಾನೆ. ಇನ್ನು ಇದು ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ. ಇನ್ನು ಈ ಪೋಸ್ಟ್ ಬಗ್ಗೆ ನಿಮಗೆ ಏನಾದ್ರು ಅನ್ನಿಸಿದ್ದಲ್ಲಿ, ಕಾಮೆಂಟ್ ಮಾಡಿ, ಶೇರ್ ಮಾಡಿ.