Welcome

ನಾಳೆಯಿಂದ 14ರವರೆಗೆ ಬಡವರಿಗೆ ಇದು ಉಚಿತ..ಸಿಎಂ ಘೋಷಣೆ..


ದಿನದಿಂದ ದಿನಕ್ಕೆ ಕೊರೋನಾ ವೈರಸ್ ವೇಗವಾಗಿ ಹರಡುತ್ತಿದ್ದು, ಇಡೀ ದೇಶದಾದ್ಯಂತ ಲಾಕ್ ಡೌನ್ ಮಾಡಲಾಗಿದೆ. ಇನ್ನು ಈ ಲಾಕ್ ಡೌನ್ ನಿಂದಾಗಿ ಆತಂಕಕ್ಕೆ ಒಳಗಾಗಿರುವವರು ಕಾರ್ಮಿಕ ವರ್ಗದವರು, ನಿರ್ಗತಿಕರು, ದಿನಕೂಲಿಯವರು, ಬಡವರು ಹಾಗೂ ಕೃಷಿಕರು.

ಹೀಗಾಗಿ ರಾಜ್ಯ ಸರ್ಕಾರ ಕೂಡ ಹಲವಾರು ಕ್ರಮಗಳನ್ನ ಕೈಗೊಳ್ಳುತ್ತಿದೆ. ಹಾಗಾಗಿ ಜನರಿಗೆ ಕೆಲವೊಂದನ್ನ ಸಡಿಲ ಮಾಡಲಾಗುತ್ತಿದೆ. ಇನ್ನು ನಾಳೆ ಗುರುವಾರದಿಂದ ಅಂದರೆ ಏಪ್ರಿಲ್ 2ರಿಂದ 14ರವರೆಗೆ ಬಡವರಿಗೆ ಉಚಿತವಾಗಿ ಹಾಲು ವಿತರಣೆ ಮಾಡುವುದಾಗಿ ಸಿಎಂ ಯಡಿಯೂರಪ್ಪನವರು ಘೋಷಣೆ ಮಾಡಿದ್ದಾರೆ. ಎಲ್ಲಾ ಜಿಲ್ಲೆಗಳಲ್ಲಿರುವ ಬಡವರಿಗೆ, ಸ್ಲಂಗಳಲ್ಲಿ ವಾಸ ಮಾಡುವವರಿಗೆ ಉಚಿತವಾಗಿ ಹಾಲು ಕೊಡಬೇಕೆಂದು ಯಡಿಯೂರಪ್ಪನವರು ಘೋಷಣೆ ಮಾಡಿದ್ದಾರೆ.

ಇನ್ನು ದಿನಬಳಕೆಯ ವಸ್ತುಗಳ ಖರೀದಿಗೆ ಜನರಿಗೆ ಅವಕಾಶ ಮಾಡಿಕೊಡಲಾಗಿದ್ದು, ತರಕಾರಿ, ಹಣ್ಣು ಸೇರಿದಂತೆ ದಿನಬಳಕೆಯ ವಸ್ತುಗಳ ಮಾರಾಟಕ್ಕೆ ಯಾವುದೇ ರೀತಿಯ ವಿರೋಧವಿಲ್ಲ ಎಂದು ಸಭೆಯಲ್ಲಿ ಸಿಎಂ ತಿಳಿಸಿದ್ದಾರೆ. ಜೊತೆಗೆ ಸರಕು ಸಾಗಾಣಿಕೆ ಮಾಡುವ ವಾಹನಗಳನ್ನ ತಡೆಯದಂತೆ ಪೊಲೀಸರಿಗೆ ಸೂಚನೆ ಕೊಟ್ಟಿದ್ದಾರೆ.

ಇನ್ನು ರೈತರು ಬೆಳೆದ ಹಣ್ಣು ತರಕಾರಿಗಳನ್ನ ಮಾರಾಟ ಮಾಡಲಾಗದೆ ತೊಂದರೆಗೆ ಸಿಲುಕಿದ್ದಾರೆ ಎಂಬ ವಿಷಯ ಸಿಎಂ ಗಮನಕ್ಕೆ ಬಂದಿದ್ದು, ಹಾಪ್ ಕಾಮ್ಸ್ ಗಳನ್ನ ಇಡೀ ದಿನ ತೆರೆಯಲು ಅನುಮತಿ ನೀಡಲಾಗಿದ್ದು, ತರಕಾರಿ, ಹಣ್ಣು ಸೇರಿದಂತೆ ಕೋಳಿ ಮೊಟ್ಟೆಗಳನ್ನು ಸಹ ಹಾಪ್ ಕಾಮ್ಸ್ ನಲ್ಲಿ ಮಾರಾಟ ಮಾಡಲು ಅವಕಾಶ ಕೊಡಲಾಗಿದೆ. ಇನ್ನು ಬಡವರಿಗೆ ಉಚಿತವಾಗಿ ಹಾಲು ಕೊಡಲಾಗುವುದು ಎಂದು ಮುಖ್ಯಮಂತ್ರಿಗಳು ಹೇಳಿದ್ದಾರೆ. ಆದರೆ ಯಾರು ಬಡವರ್ರು ಎಂಬುದನ್ನ ಹೇಗೆ ಗುರುತಿಸುತ್ತಾರೋ ಎಂಬುದರ ಬಗ್ಗೆ ಕಾಡು ನೋಡಬೇಕಾಗಿದೆ. ಸ್ನೇಹಿತರೆ ಇದರ ಬಗ್ಗೆ ನಿಮ್ಮ ಅಭಿಪ್ರಾಯ ಏನು ಎಂಬುದನ್ನ ತಿಳಿಸಿ..