Welcome

ಬೀದಿಯಲ್ಲಿ ಹೋಗುತ್ತಿದ್ದ ಪೌರ ಕಾರ್ಮಿಕರಿಗೆ ಹೂಮಳೆ ಸುರಿಸಿ ಹಣದ ಹಾರ ಹಾಕಿದ ಜನರು..ಈ ವೈರಲ್ ವಿಡಿಯೋ ನೋಡಿ..


ಕೊರೋನಾ ಸೋಂಕಿನ ಹಿನ್ನಲೆಯಲ್ಲಿ ಸಾರ್ವಜನಿಕರು ಮನೆಯಿಂದ ಹೊರಬರದಂತೆ ದೇಶದಾದ್ಯಂತ ಲಾಕ್ ಡೌನ್ ಆಗಿದೆ. ಆದರೆ ವೈದ್ಯರು, ನರ್ಸ್ ಗಳು, ಪೊಲೀಸರು ಸೇರಿದಂತೆ ಪೌರ ಕಾರ್ಮಿಕರು ತಮ್ಮ ಜೀವದ ಅಂಗನ್ನು ತೊರೆದು ನಮ್ಮ ಆರೋಗ್ಯಕ್ಕೋಸ್ಕರ ನಿರಂತರವಾಗಿ ಕೆಲಸ ಮಾಡುತ್ತಿದ್ದಾರೆ.

ಇನ್ನು ಕೊರೋನಾ ಸೋಂಕಿನ ಭಯವಿದ್ದರೂ ನಮ್ಮ ಆರೋಗ್ಯಕ್ಕಾಗಿ ಬೀದಿಗಳಲ್ಲಿರುವ ಕಸವನ್ನ ತೆಗೆದು ಸ್ವಚ್ಛ ಮಾಡುತ್ತಾ ನಿರಂತರವಾಗಿ ದುಡಿಯುತ್ತಿರುವ ಪೌರ ಕಾರ್ಮಿಕರಿಗೆ ನಾವು ಹ್ಯಾಟ್ಸಪ್ ಹೇಳಲೇಬೇಕು. ಈಗ ಅದರಂತೆ ರಸ್ತೆಯಲ್ಲಿ ಹೋಗುತ್ತಿದ್ದ ಪೌರ ಕಾರ್ಮಿಕರಿಗೆ ಹೂಮಳೆ ಸುರಿಸುವುದರ ಮೂಲಕ ತಮ್ಮ ಧನ್ಯವಾದ ತಿಳಿಸಿದ್ದಾರೆ.

ಇನ್ನು ಹೀಗೆ ಬೀದಿಯಲ್ಲಿ ಹೋಗುತ್ತಿದ್ದ ಪೌರ ಕಾರ್ಮಿಕರಿಗೆ ಜನರು ಹೂವಿನ ಸುರಿಮಳೆ ಸುರಿಸುವುದರ ಮೂಲಕ ಧನ್ಯವಾದ ತಿಳಿಸಿದ್ದು ಪಂಜಾಬ್ ನ ಪಟಿಯಾಲಾದ ನಭಾ ಪ್ರದೇಶದಳ್ಳಿ. ಇನ್ನು ಪೌರ ಕಾರ್ಮಿಕರಿಬ್ಬರು ಬಡಾವಣೆಯೊಂದರ ರಸ್ತೆಯೊಂದರಲ್ಲಿ ತಮ್ಮ ವಾಹನದ ಮೂಲಕ ಸಾಗುತ್ತಿದ್ದ ವೇಳೆ ಮನೆಗಳ ಮೇಲೆ ನಿಂತು ಜನರು ಅವರ ಮೇಲೆ ಹೂವಿನ ಸುರಿಮಳೆ ಸುರಿಸಿದ್ದಾರೆ.

ಇನ್ನು ರಸ್ತೆಯಲ್ಲಿದ್ದ ಇಬ್ಬರು ಹಣದ ಹಾರಗಳನ್ನ ಹಾಕಿ ಪೌರ ಕಾರ್ಮಿಕರಿಗೆ ಧನ್ಯವಾದ ತಿಳಿಸಿದ್ದಾರೆ. ಇನ್ನು ಕಟ್ಟಡಗಳ ಮೇಲಿದ್ದ ಜನರು ಚಪ್ಪಾಳೆ ತಟ್ಟುವ ಮೂಲಕ ಅಭಿನಂದನೆ ಸಲ್ಲಿಸಿದ್ದಾರೆ. ಇನ್ನು ಟ್ವಿಟ್ಟರ್ ನಲ್ಲಿ ಈ ವಿಡಿಯೋ ಸೋಷಿಯಲ್ ಮೀಡಿಯಾಗಳಲ್ಲಿ ಸಖತ್ ವೈರಲ್ ಆಗಿದ್ದು, ನಿಮ್ಮ ನಿಮ್ಮ ಏರಿಯಾಗಳಲ್ಲಿ ಕೆಲಸ ಮಾಡುತ್ತಿರುವ ಪೌರ ಕಾರ್ಮಿಕರಿಗೆ, ಅವರು ಮಾಡುತ್ತಿರುವ ಕೆಲಸಕ್ಕೆ ಅಭಿನಂದನೆ ಸಲ್ಲಿಸಿ ಎಂದು ನೆಟ್ಟಿಗರು ಕಾಮೆಂಟ್ ಗಳನ್ನ ಮಾಡುತ್ತಿದ್ದಾರೆ. ಇನ್ನು ಜನರ ಈ ಕೆಲಸಕ್ಕೆ ಮೆಚ್ಚುಗೆಗಳ ಮಹಾಪೂರವೇ ಹರಿದುಬಂದೆ. ಇನ್ನು ಇದರ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ..ಹಾಗೂ ಮರೆಯದೆ ಶೇರ್ ಮಾಡಿ..ನಿಮ್ಮ ಬಡಾವಣೆಗಳಲ್ಲಿ ಕೆಲಸ ಮಾಡುವ ಪೌರ ಕಾರ್ಮಿಕರಿಗೆ ಅಭಿನಂದನೆ ಸಲ್ಲಿಸಿ..