40 ವರ್ಷಗಳಿಗೊಮ್ಮೆ ಮಾತ್ರ ಸಿಗುತ್ತೆ ಈ ದೇವರ ದರ್ಶನ ಭಾಗ್ಯ!ಅದು ಕೇವಲ 48 ದಿನಗಳು ಮಾತ್ರ!ನಮ್ಮ ಪಕ್ಕದಲ್ಲೇ ಇದೆ ಆ ದೇವಸ್ಥಾನ…

Uncategorized

ತಮಿಳುನಾಡು ದೇಗುಲಗಳ ನಗರಿ ಎಂದೇ ಪ್ರಖ್ಯಾತವಾಗಿದೆ. ಈಗ ದೇಗುಲಗಳ ನಗರಿ ಕಾಂಚೀಪುರದಲ್ಲಿ ಬರೋಬ್ಬರಿ 40 ವರ್ಷಗಳಿಂದ ನೀರಿನಲ್ಲಿದ್ದ ಅಥಿ ವರದಾರ್ ದೇವರ ವಿಗ್ರಹವನ್ನು ಮೇಲಕ್ಕೆತ್ತಲಾಗಿದ್ದು, ದೇವರ ದರ್ಶನ ಪಡೆಯಲು ಲಕ್ಷಾಂತರ ಮಂದಿ ಭಕ್ತಾದಿಗಳು ದೇವಸ್ಥಾನದ ಕಡೆ ಬರುತ್ತಿದ್ದಾರೆ.

ಈ ದೇವಸ್ಥಾನದ ವಿಶೇಷವೇನೆಂದರೆ ಪುರಾತನಕಾಲದಿಂದಲೂ 40 ವರ್ಷಕ್ಕೊಮ್ಮೆ ಮಾತ್ರ ದೇವಸ್ಥಾನದ ಬಾಗಿಲು ತೆಗೆಯಲಾಗುತ್ತದೆ. ಈ ವೇಳೆ ಕೇವಲ 48 ದಿನಗಳು ಮಾತ್ರ ಅಥಿ ವರದಾರ್ ದೇವರ ದರ್ಶನ ಭಕ್ತಾದಿಗಳು ಪಡೆಯಬಹುದಾಗಿದೆ. 48 ದಿನಗಳು ಮುಗಿದ ಬಳಿಕ ದೇವರ ಮೂರ್ತಿಯನ್ನು ಮತ್ತೆ ನೀರಿನಲ್ಲಿ ಇಡಲಾಗುತ್ತದೆ.

ಇದಕ್ಕೂ ಮುಂಚೆ 1979ರಲ್ಲಿ ದೇವಾಲಯದ ಬಾಗಿಲು ತೆಗೆದಿತ್ತು. ಆಗ ಭಕ್ತಾದಿಗಳಿಗೆ ಅಥಿ ವರದಾರ್ ದೇವರ ದರ್ಶನದ ಭಾಗ್ಯ ಸಿಕ್ಕಿತ್ತು. ಅದಕ್ಕೂ ಮೊದಲು 1939ರಲ್ಲಿ ದೇವರ ದರ್ಶನದ ಭಾಗ್ಯ ಸಿಕ್ಕಿತ್ತು. ಈಗ ಮತ್ತೆ ಆ ಸುದಿನ ಕೂಡಿಬಂದಿದ್ದು, ಜುಲೈ1 ಸೋಮವಾರದಿಂದ 48 ದಿನಗಳ ಕಾಲ ಭಕ್ತಾದಿಗಳಿಗೆ ಅಥಿ ವರದಾರ್ ದೇವರ ದರ್ಶನ ಭಾಗ್ಯ ಸಿಗಲಿದೆ. ಪ್ರತಿದಿನ ಬೆಳಗ್ಗೆ 5 ಗಂಟೆಯಿಂದ ರಾತ್ರಿ 8 ಗಂಟೆಯವರೆಗೆ ಭಕ್ತಾದಿಗಳು ದೇವಸ್ಥಾನಕ್ಕೆ ಭೇಟಿಕೊಟ್ಟು ದೇವರ ದರ್ಶನ ಪಡೆಯಬಹುದಾಗಿದೆ ಎಂದು ದೇವಸ್ಥಾನದ ಮಂಡಳಿ ತಿಳಿಸಿದೆ.

ಜುಲೈ ೧ ಆಗಸ್ಟ್ ೯ ರವರೆಗೆ ಅಂದರೆ ಮೊದಲ 40 ದಿನಗಳ ಕಾಲ ದೇವರ ವಿಗ್ರಹವನ್ನು ಮಲಗಿಸಿದ ರೀತಿಯಲ್ಲಿ ಇಡಲಾಗುತ್ತದೆ. ಬಳಿಕ ಆಗಸ್ಟ್ 10ರಿಂದ 17ರವರೆಗೆ ಅಂದರೆ ಎಂಟು ದಿನಗಳ ಕಾಲ ದೇವರನ್ನು ವಿಗ್ರವನ್ನು ನಿಂತ ಭಂಗಿಯಲ್ಲಿ ನಿಲ್ಲಿಸಲಾಗುತ್ತದೆ.

ಕೇವಲ 40 ವರ್ಷಗಳಿಗೊಮ್ಮೆ ಮಾತ್ರ ದೇವಸ್ಥಾನದ ಬಾಗಿಲನ್ನು ತೆಗೆಯುವುದೇಕೆ.?

ಅಥಿ ವರದಾರ್ ದೇವಸ್ಥಾನದ ಬಾಗಿಲನ್ನು 40 ವರ್ಷಗಳಿಗೊಮ್ಮೆ ಮಾತ್ರ ತೆಗೆಯುವುದಕ್ಕೆ ಕಾರಣವೂ ಇದೆ. ಹದಿನಾರನೇ ಶತಮಾನದಲ್ಲಿ ಶ್ರೀ ವರದರಾಜ ಪೆರುಮಾಳ್ ದೇವಸ್ಥಾನದಲ್ಲಿ ಮೂರ್ತಿಗೆ ಪೂಜೆಯನ್ನು ನೆರವೇರಿಸಲಾಗುತ್ತದೆ. ಆ ಸಮಯದಲ್ಲಿ ದೇವಾಲಯದ ಮೇಲೆ ದಾಳಿಕೋರರು ದಾಳಿ ನಡೆಸಿದ್ದರಿಂದ, ದೇವರ ಮೂಲ ವಿಗ್ರಹವನ್ನು ಆ ದೇವಸ್ಥಾನದ ಕಲ್ಯಾಣಿಯಲ್ಲಿ ಬಚ್ಚಿಡಲಾಗಿತ್ತು.

ದಾಳಿ ಆದ ನಂತರ ದೇವಾಲಯದ ಸಿಬ್ಬಂದಿ ಎಷ್ಟು ಹುಡುಕಿದರೂ ದೇವರ ಮೂಲ ವಿಗ್ರಹ ಎಲ್ಲಿದೆ ಎನ್ನುವುದು ಗೊತ್ತಾಗಲಿಲ್ಲ. ಬಳಿಕ ಅಥಿ ವರದಾರ್ ದೇವರ ಮತ್ತೊಂದು ವಿಗ್ರಹ ಮಾಡಿಸಿ ದೇವರ ಪೂಜೆ ನೆರವೇರಿಸಲಾಗುತಿಟ್ಟು. ಆದರೆ 1709ರಲ್ಲಿ ಅಂದರೆ 40 ವರ್ಷದ ಬಳಿಕ ದೇವಾಲಯದ ಕಲ್ಯಾಣಿಯಲ್ಲಿದ್ದ ನೀರು ಕಾರಣಾಂತರಗಳಿಂದ ಖಾಲಿಯಾಗಿತ್ತು. ಇದೇ ಸಮಯದಲ್ಲಿ ಕಲ್ಯಾಣಿಯಲ್ಲಿ ಬಚ್ಚಿಟ್ಟಿದ್ದ ಅಥಿ ವರದಾರ್ ದೇವರ ವಿಗ್ರಹ ಪತ್ತೆಯಾಯಿತು. ಆ ಬಳಿಕವೇ 40 ವರ್ಷಕ್ಕೊಮ್ಮೆ ದೇವರ ವಿಗ್ರಹವನ್ನು ನೀರಿನಿಂದ ಹೊರತೆಗೆದು ೪೮ ದಿನಗಳಾ ಕಾಲ ಪೂಜಿಸುವ ಸಂಪ್ರದಾಯ ಹುಟ್ಟಿಕೊಂಡಿತ್ತು ಎಂದು ಹೇಳಲಾಗಿದೆ.